00:00
04:10
ಎಲ್ಲೂ, ಎಲ್ಲೂ ಈಗ ನನಗೆ ನಿನ್ನೇ ಹುಡುಕೋ ತವಕ
ಬೇರೆ ಏನೂ ಬೇಡ ನನಗೆ, ನಿನ್ನ ತಲುಪೋ ತನಕ
ನಿನ್ನ ಸೇರೋ ಭರದಲ್ಲಿ ಏನಿಂಥ ಪುಳಕ
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು?
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು?
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು
♪
ಕನ್ನಡಿ ಮುಂದೂ ನವಿರಾದ ಸಿಹಿಸಂಕಟ
ಈ ಪರಿಣಾಮ ನೀ ಬೇಕು ಏನುವ ಹಠ
ಅದು ಯಾಕೋ ಅಭಿಲಾಷೆ ನಸುನಾಚುತ್ತಿದೆ
ನನಗೀಗ ಅತಿಯಾಗಿ ಒಲವಾಗುತ್ತಿದೆ
ನಿನಗಾಗಿ ಕೂಡಿಟ್ಟೆ ಈ ತುಂಟ ಸಲಿಗೆ
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು?
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು?
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು
♪
ಸಂದಣಿಯಲ್ಲೂ ನಿನ್ನ ಕಾಣೋ ಅಭಿಸಾರಿಕೆ
ಕಣ್ಣೆದೆಯಿಂದ ತುಸು ನೋಡು ಎದೆ ಕೋರಿಕೆ
ನಿನಗಾಗಿ ನನ್ನ ಪಾಡು ಒಮ್ಮೆ ಆಲಿಸು
ನನ್ನ ಎಲ್ಲ ಬಿಡಿ ಆಸೆ ನೀ ಈಡೇರಿಸು
ಏನೇನೂ ಬೇಕಿಲ್ಲ ನೀ ಸಿಕ್ಕ ಗಳಿಗೆ
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು?
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು
ನನಗೀಗ ಏನಾಯ್ತು? ಯಾಕ್ ಹೀಗೆ ಆಗೋಯ್ತು
ಅರಿವೇ ಇಲ್ಲದೆ ನನ್ನೇ ನಾ ಮರೆತಾಯ್ತು