00:00
03:31
ಏಕೋ? ಏನೋ? ನನಗೇನೋ ಆಗಿದೆ
ನಿನ್ನ ಚಹರೆ ಬಿಡದೇನೇ ಕಾಡಿದೆ
ಏಕೋ? ಏನೋ? ನನಗೇನೋ ಆಗಿದೆ
ನಿನ್ನ ಚಹರೆ ಬಿಡದೇನೇ ಕಾಡಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ, ಬಾಳೇ ಬೆಳಕಂತೆ
ಓ, ಸಖಿಯೇ, ಸಖಿಯೇ, ಹೊಸತೇನೋ ಭಾವನೆ
ಓ, ಸಖಿಯೇ, ಸಖಿಯೇ, ಏನಿದರ ಸೂಚನೆ?
ಓ, ಸಖಿಯೇ, ಸಖಿಯೇ, ನೀನಾದೆ ಪ್ರೇರಣೆ
ಓ, ಸಖಿಯೇ, ಸಖಿಯೇ, ಇನ್ಯಾಕೆ ಯೋಚನೆ?
♪
ಪ್ರೀತಿಯ ಕಂತೆ ಮಾರುವೆ ನಾ, ಕೊಳ್ಳುವೆಯಾ, ಗೆಳೆಯಾ?
ಕಾಯುತ ಕೂತೆ ಸಂತೆಯಲಿ ನಿನ್ನನೇ
ಏತಕೆ ಚಿಂತೆ? ಮಾಡುವೆ ಮುಂಗಡ ಪಾವತಿ ನಾ, ಗೆಳತಿ
ಸಲೀಸಾಗಿ ಪಡೆವೆ ಹೆ ಚ್ಚಾದರೂ ಧಾರಣೆ
ನಿನ್ನ ನಗುವ ಅರಿವಳಿಕೆ ನನಗಾಯ್ತು ಮತಿ ಭ್ರಮಣೆ
ಪ್ರತಿ ಕ್ಷಣದ ಕನವರಿಕೆ ಸೇರಿ ಆಚರಣೆ
ಏಕೋ? ಏನೋ? ನನಗೇನೋ ಆಗಿದೆ
ಎರಡೂ ಕಣ್ಣು ನಿನ್ನನ್ನೇ ಹುಡುಕಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ, ಬಾಳೇ ಬೆಳಕಂತೆ
ಓ, ಸಖಿಯೇ (ಸಖಿ)
ಸಖಿಯೇ, ಹೊಸತೇನೋ ಭಾವನೆ
ಓ, ಸಖಿಯೇ, ಸಖಿಯೇ, ಏನಿದರ ಸೂಚನೆ?
ಓ, ಸಖಿಯೇ, ಸಖಿಯೇ, ನೀನಾದೆ ಪ್ರೇರಣೆ (ಓ, ಸಖಿಯೇ)
ಓ, ಸಖಿಯೇ (ಸಖಿಯೇ)
ಸಖಿಯೇ (ಸಖಿಯೇ)
ಇನ್ಯಾಕೆ ಯೋಚನೆ?