00:00
05:12
ದೂರ ಇನ್ನು ದೂರ ಕಾಣದೂರ ಕಡೆಗೆ
ಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆ
ಇಲ್ಲಿ ಇಲ್ಲದೇನೋ ಅಲ್ಲಿ ಸಿಗುವ ಬಯಕೆ (ಇಲ್ಲಿ ಇಲ್ಲದೇನೋ ಅಲ್ಲಿ ಸಿಗುವ ಬಯಕೆ)
ಇನ್ನು ಕಾಣೋ ಬದುಕು ಪ್ರತಿ ಘಳಿಗೆ ಕಲಿಕೆ
♪
ಕೀಲಿ ಕೊಟ್ಟ ಗೊಂಬೆ ಅಂತೆ ಈ ಭೂಮಿ
ಮಜಾ ನೋಡುತಿರುವ ಬೇನಾಮಿ
ಬೇಲಿ ಹಾರಿ ಹೋರಾಟ ಮೆರವಣಿಗೆ
ನಕಾಶೆ ಇರದ ಆಸಾಮಿ
ಕತ್ತಲಾಚೆ ಏನಿದೆ?
ತಿಳಿಯದೆ ನುಗ್ಗುವ ಈ ತಯಾರಿ?
ಬೆಳಕು ಕಾಣೋ ಭರದಲಿ ಹಿಂತಿರುಗಿ ನೋಡದ ಸವಾರಿ
ಸಂಚಾರ ಕಾಣದೂರಿಗೆ
ಅಲೆಮಾರಿಯೇ
ಅಲೆಮಾರಿಯೇ
♪
ನೆನಪೆಲ್ಲಾ ಮಾಸಿರಲು
ತಿರುವಿ ಹಾಕು ಹೊಸ ಪುಟವ
ಹಾಗೆ ಬಿಟ್ಟ ಜಾಗದಲ್ಲಿ ತುಂಬುವನು ಭವವ
ಆ ಮಡಿಲ ತಂಪನು
ಈ ಮಣ್ಣಲಿ ಹುಡುಕುತ
ತಿರುಗಿದೆ ವಿಳಾಸವಿಲ್ಲದೆ
ಅಲೆಮಾರಿಯೇ
ಅಲೆಮಾರಿಯೇ
♪
ತಿರುವಿನ ತುದಿಯಲಿ, ತಿಳಿಯದ ಸುಳಿ ಇದೆ (ತಿರುವಿನ ತುದಿಯಲಿ, ತಿಳಿಯದ ಸುಳಿ ಇದೆ)
ಬಿರುಸಿನ ಬದುಕಿಗೆ, ಬಯಸದ ಬೆಲೆ ಇದೆ (ಬಿರುಸಿನ ಬದುಕಿಗೆ, ಬಯಸದ ಬೆಲೆ ಇದೆ)
ಬಾಳು ಒಂದು ಖಾಲಿ ಸಂತೆ
ಇಲ್ಲಿ ನಮ್ಮ ಉಳಿವು ಭ್ರಮೆ ಅಂತೆ
ನಿನ್ನಲ್ಲಿರೋ ಉತ್ತರ
ಇನ್ನೆಲ್ಲೋ ನೀ ಬೇಡುತ
ತಿರುಗಿದೆ ವಿಳಾಸವಿಲ್ಲದೆ
♪
ಬೇಲಿ ಹಾರಿ ಹೋರಾಟ ಮೆರವಣಿಗೆ
ನಕಾಶೆ ಇರದ ಆಸಾಮಿ
ಕತ್ತಲಾಚೆ ಏನಿದೆ?
ತಿಳಿಯದೆ ನುಗ್ಗುವ ಈ ತಯಾರಿ?
ಬೆಳಕು ಕಾಣೋ ಭರದಲಿ ಹಿಂತಿರುಗಿ ನೋಡದ ಸವಾರಿ
ಸಂಚಾರ ಕಾಣದೂರಿಗೆ
ಅಲೆಮಾರಿಯೇ
ಅಲೆಮಾರಿಯೇ