Kanna Muche Kaade Goode - From "Rambo" - Vijay Prakash

Kanna Muche Kaade Goode - From "Rambo"

Vijay Prakash

00:00

05:24

Similar recommendations

Lyric

ಕಣ್ಣಾಮುಚ್ಚೆ ಕಾಡೇಗೂಡೆ ಆಟ ನಮ್ಮ ಬಾಳು

ಯಾರ್ಯಾರ್ ಹಣೇಲೇನೇನಿದೆ ಬಲ್ಲೋರ್ಯಾರು ಹೇಳು

ಕಣ್ಣಾಮುಚ್ಚೆ ಕಾಡೇಗೂಡೆ ಆಟ ನಮ್ಮ ಬಾಳು

ಯಾರ್ಯಾರ್ ಹಣೇಲೇನೇನಿದೆ ಬಲ್ಲೋರ್ಯಾರು ಹೇಳು

ಅಯ್ಯೋ ನನ್ನ ಪ್ರೀತಿ ಶವ ಚಿತೆಯೇರುತಿದೆ

ವ್ಯಥೆ ಜೊತೆ ಕಥೆ ಮುಗಿದಿದೆ

ವಿಧಿಯ ನಾಟಕ (ನಾಟಕ, ನಾಟಕ)

ವಿಧಿಯ ನಾಟಕ (ನಾಟಕ)

ಒಹೋ, ವಿಧಿಯ ನಾಟಕ ನನ್ನ ಬದುಕು ಸೂತಕ

(ಮುರಿದ ಕೊಳಲು ತರದು ಎಂದು ಮಧುರವಾದ ಸ್ವರವನು

ಒಡೆದ ಮನಸು ಮರೆಯದೆಂದು ಜೊತೆಯಲಿದ್ದ ಕ್ಷಣವನು

ಅಲೆಗಳೆದುರು ಮರಳಗೂಡು ಒಪ್ಪಬೇಕು ಸೋಲನು

ವಿಧಿಯ ಮಾತಿಗೆದುರು ಮಾತು ಕೊಡಲೇಬಾರ್ದು ಮನುಜನು)

ಮರೆತರೆ ನಿನ್ನ ಜಗದ ಜನರು

ಇರುವುದೊಂದೆ ತಾಯಿ ಮಡಿಲು

ತೊರೆದರೆ ಹೇಗೆ ಹೆತ್ತಕರುಳು

ಕೇಳೋರ್ಯಾರು ನಿನ್ನ ಅಳಲು

ಸುರಿಯುವ ಕಣ್ಣೀರಲೇ ಮನಸಿನ ನೋವಿದೆ

ಒಲವಿನ ಸಮಾಧಿಗೆ ಹೃದಯದ ಹೂವಿದೆ

ಕೊನೆಯಾಗುತಿದೆ ಯಾತ್ರೆ ಹೆಜ್ಜೆ ಇಡುವ ಮುನ್ನ

ತೇರೇ ಇಲ್ದೆ ಜಾತ್ರೆ ಮುಗಿದಿದೆ

ವಿಧಿಯ ನಾಟಕ

ವಿಧಿಯ ನಾಟಕ

ವಿಧಿಯ ನಾಟಕ ನನ್ನ ಬದುಕು ಸೂತಕ

(ಜೀವನವೇ ಪಾಠಶಾಲೆ ಎಲ್ಲ ಕಲಿಯಲಾಗದು

ಕಾಲಚಕ್ರದಡಿಗೆ ಸಿಲುಕಿ ಕಾಲುಕೈ ಆಡದು

ತಾನೆ ಎಣೆದ ಬಲೆಗೆ ಜೇಡ ತನ್ನ ಬಲಿಯ ಕೊಡುವುದು

ನೀನೆ ತೋಡಿಕೊಂಡ ಗುಂಡಿ ಹೇಳು ತಪ್ಪು ಯಾರದು)

ಕಣ್ಣಾಮುಚ್ಚೆ ಕಾಡೇಗೂಡೆ ಆಟ ನಮ್ಮ ಬಾಳು

ಯಾರ್ಯಾರ್ ಹಣೇಲೇನೇನಿದೆ ಬಲ್ಲೋರ್ಯಾರು ಹೇಳು

- It's already the end -