00:00
03:48
ಅಳು ಬಂದರೂ ಅಳ ಬಾರದು
ಮನಸೇ ಇರು ತಡೆದು
ಪ್ರತಿ ಪ್ರೀತಿಗೂ ಗೆಲುವಾಗದು
ನಿಜವೇ ಇದೂ ಇದು
ಯಾರನು ದೂರಲಿ ನನ್ನದೇ ತಪ್ಪಿರುವಾಗ
ನೋಡುತಾ ನಿನ್ನಲಿ ಹೇಗೆ ಈಗ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ
♪
ಯಾಕೆ ಮಾಡಿಕೊಂಡೆನಾ
ಇಂಥದೊಂದು ಆತ್ಮ ವಂಚನೆ
ನನ್ನ ಸ್ವಪ್ನ ಲೋಕಕೆ
ನಾನೇ ಬೆಂಕಿ ಹಚ್ಚಿಕುಂತೆನೇ
ಬರಿ ಮರಳಲ್ಲಿ ಗೀಚಿದ ಹೆಸರಾ
ಅಲೆ ಅಳಸಿದೆ ಒಮ್ಮೆಲೆ ಈಗ
ಅಸಹಾಯಕ ವೀಕ್ಷಕ ನಾನು
ಏನು ಮಾಡಲೀ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ
♪
ಇನ್ನು ಮುಂದೆ ಭೇಟಿಗೆ
ಇಲ್ಲ ಒಂದೇ ಒಂದು ಕಾರಣ
ಮಾತು ಬಂದು ಮೂಕನೇ
ಆಗಿ ಹೋದೆ ಯಾಕೆ ಈ ದಿನ
ಬಲು ಸನಿಹದ ಸ್ನೇಹಿತೆ ನೀನು
ಬಲು ದೂರಕೆ ಸಾಗುವೆ ಏನು
ನೀನಿರದಿರೆ ಬದುಕುವನೇನು
ನಾನು ಕಾಣೆನು
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ